Back to Main site

ಸ್ವರಾಜ್ಯ ಉತ್ಸವ: ಹಳ್ಳಿಹಳ್ಳಿಯಲ್ಲಿ ರೈತಸಂಘದ ಪ್ರಚಾರ

ಪಾಂಡವಪುರ, ಸೆ.13: ಪುಟ್ಟಣ್ಣಯ್ಯ ಫೌಂಡೇಶನ್‌ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗದಲ್ಲಿ ಸೆ.13ರಂದು ನಡೆಯಲಿರುವ ಸ್ವರಾಜ್ಯ ಉತ್ಸವದ ಹಿನ್ನೆಲೆಯಲ್ಲಿ ರೈತ ಸಂಘದ ಕಾರ್ಯಕರ್ತರು ಭರದ ಪ್ರಚಾರ ಆರಂಭಿಸಿದ್ದಾರೆ.

ರೈತ ಸಂಘದ ಯುವ ಮುಖಂಡರಾದ ಅನಿಲ್‌ ಬೇವಿನಕುಪ್ಪೆ ಅವರ ನೇತೃತ್ವದಲ್ಲಿ

ಮಂಗಳವಾರ ಬೆಳಿಗ್ಗೆ ಪಾಂಡುಪುರ ತಾಲೂಕಿನ ಬಸ್‌ ನಿಲ್ದಾಣ ಮತ್ತು ತರಕಾರಿ ಮಾರುಕಟ್ಟೆಗಳಲ್ಲಿ ಜನಸಾಮಾನ್ಯರಿಗೆ ಕರಪತ್ರವನ್ನು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಪಾಂಡವಪುರ ತಾಲೂಕಿನ ಬನಗಾಟ, ಬೇವಿನಕೊಪ್ಪ, ಬಳೆದಕುಪ್ಪೆ, ಕೆ. ಹೊಸೂರ್, ಹಿರೇಮರಳಿ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿಮಾಡಿ ಕಾರ್ಯಕ್ರಮದ ವಿವರಗಳನ್ನು ನೀಡಿ ಭಾಗವಹಿಸಿ ಎಂದು ಮನವಿ ಮಾಡಿಕೊಂಡರು.

” ಈ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು ಭಾಗವಹಿಸಲಿದ್ದು ಆಡಳಿತ, ಲಿಂಗ ಸಮಾನತೆ- ಸಾಮಾಜಿಕ ನ್ಯಾಯ, ಶಿಕ್ಷಣ-ಯುವಸಬಲೀಕರಣ, ಕೃಷಿ-ಸ್ಥಳೀಯ ಆರ್ಥಿಕತೆ, ಯುವಜನ-ಉದ್ಯಮಶೀಲತೆ, ತ್ಯಾಜ್ಯ ನಿರ್ವಹಣೆ, ಪ್ರವಾಸೋದ್ಯಮ, ಪರಿಸರ, ಆರೋಗ್ಯ, ಮೂಲಸೌಕರ್ಯ ಈ ತರಹದ ವಿಷಯಗಳ ಮೇಲೆ ಚರ್ಚೆ, ಸಂವಾದ ಮತ್ತು ಪ್ರದರ್ಶನಗಳು ಮಾಡಲಿದ್ದಾರೆ. ಸ್ವಾವಲಂಬಿ, ಸ್ವಾಭಿಮಾನಿ ಗ್ರಾಮಗಳನ್ನು ನಿರ್ಮಿಸಲು ತಾವೆಲ್ಲರೂ ಈ ಉತ್ಸವದಲ್ಲಿ ಭಾಗವಹಿಸುವುದು ಮುಖ್ಯ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದುರೈತ ಸಂಘದ ಕಾರ್ಯಕರ್ತರು ಮನವಿ ಮಾಡಿದರು.

ಸೆಪ್ಟೆಂಬರ್ 13ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5ಗಂಟೆಯವರೆಗೆ ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಸ್ವರಾಜ್ ಉತ್ಸವ ನಡೆಯಲಿದೆ.

Share:

More Posts

ನಿರುದ್ಯೋಗ ಸಮಸ್ಯೆಗೇನು ಪರಿಹಾರ? ರೈತನ ಬೆಳೆಗೆ ಬೆಲೆ ಇಲ್ವಾ?: ಶಾಸಕ ಪುಟ್ಟಣ್ಣಯ್ಯಗೆ ವಿದ್ಯಾಥಿಗಳಿಂದ ಪ್ರಶ್ನೆಗಳ ಬಾಣ

ಪಾಂಡವಪುರ, ಸೆಪ್ಟೆಂಬರ್ 12: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೂಕ್ತ ವಿದ್ಯಾ‍ರ್ಹತೆ ಇದ್ದೂ ಕೆಲಸ ಸಿಗುವುದಿಲ್ಲ, ನೇಮಕಾತಿ ಭ್ರಷ್ಟಾಚಾರ ಸರ್ಕಾರಿ ನೌಕರಿಯ ಆಸೆಯನ್ನು ಕಮರಿ ಹೋಗುವಂತೆ ಮಾಡಿದೆ. ಇದಕ್ಕೇನು ಪರಿಹಾರ? ರೈತ ಬೆಳೆದ ಬೆಲೆ ಸಿಗದೆ

Read More »

ಪಾಂಡವಪುರದಲ್ಲಿ ‘ಸ್ವರಾಜ್ ಉತ್ಸವ’ ಭರದ ಸಿದ್ದತೆ

ಪಾಂಡವಪುರ, ಸೆ.9: ಪಾಂಡವಪುರದಲ್ಲಿ ಮೊದಲ ಬಾರಿಗೆ 40ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ, ಪುಟ್ಟಣ್ಣಯ್ಯ ಫೌಂಡೇಶನ್ ಮತ್ತು ಕರ್ನಾಟಕ ರಾಜ್ಯ ರೈತ ಸಂಘವು ಸೆಪ್ಟೆಂಬರ್ 13ರಂದು ಸ್ವರಾಜ್ ಉತ್ಸವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮಕ್ಕೆ

Read More »

ಸ್ವರಾಜ್ ಉತ್ಸವದಲ್ಲಿ ಪ್ಲಾಸ್ಟಿಕ್‌ ಅಸುರ, ಕ್ಯಾತನಹಳ್ಳಿ ಗ್ರಾಮ ವಿನ್ಯಾಸ ಸುಂದರ!!

ಪಾಂಡವಪುರ, ಸೆ. 13- ಪಾಂಡವ ಕ್ರೀಡಾಂಗಣದಲ್ಲಿ ನಡೆದ ಸ್ವರಾಜ್ ಉತ್ಸವವು ವೈವಿಧ್ಯಮಯ ಮಳಿಗೆಗಳ ಸಮಾಗಮದಿಂದ ಕಳೆಗಟ್ಟಿತು. ಆರೋಗ್ಯ, ಕೃಷಿ, ಯುವಜನ ಸಬಲೀಕರಣ, ಮಹಿಳಾ ಸಶಕ್ತೀಕರಣ, ಪರಿಸರ, ತಂತ್ರಜ್ಞಾನ, ತ್ಯಾಜ್ಯ ನಿರ್ವಹಣೆ ಸೇರಿದಂತೆ 12ಕ್ಕೂ ಹೆಚ್ಚು

Read More »

ದೇಶಗಳ ಅಭಿವೃದ್ಧಿಗೆ ಹಳ್ಳಿಗಳೇ ಬೇಕು: ದರ್ಶನ್‌ ಪುಟ್ಟಣ್ಣಯ್ಯ

ಪಾಂಡವಪುರ, ಸೆ. 13: ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯಂತೆ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಹಳ್ಳಿಯ ಜೀವನವನ್ನು ಸುಧಾರಿಸುವುದು, ಉಪ ಉತ್ಪನ್ನಗಳ ಮೂಲಕ ಆರ್ಥಿಕತೆಯನ್ನು ಬಲಪಡಿಸುವುದೇ ಸ್ವರಾಜ್‌ ಉತ್ಸವದ ಗುರಿ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ

Read More »

ಸ್ವಾವಲಂಬನೆಗೆ ‘ಸ್ವರಾಜ್ ಉತ್ಸವ’ ಸೆ.13ಕ್ಕೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಬುಧವಾರ ನಡೆದ ರೈತ ಸಂಘ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಫೌಂಡೇಷನ್‌ನಿಂದ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ರಾಜ್ಯದ ವಿವಿಧ ಭಾಗಗಳ ಸುಮಾರು

Read More »